Friday, March 7, 2008

ಹಸಿದಿಹ ಹೊಟ್ಟೆಯ ತಿರುವು.


ಬಡವನ ಹೊಟ್ಟೆಯ ಚುರುಗುಟ್ಟುವಿಕೆಗೆ
ಸಿಡಿಲ ಆರ್ಭಟವು ಕೇಳಿಸದಾಯಿತು
ರಣಹದ್ದು ವಾರದೀಚೆ ಬೇಟೆಯ ಕಾಯುತ್ತಿರಲು
ಹಸಿದ ಹುಲಿಯು ಹೇಲ ತಿನ್ನುವಷ್ಟು ಬರ,

ಉಳಿದದ್ದು ನರಿ ತೋಳದ ಪಾಲು
ಇದ ಕಂಡವನ ಹೊಟ್ಟೆ ಹುಳದ ಆರ್ತನಾದ ಮುಗಿಲು ಮುಟ್ಟಿತು.
ಹಸಿವ ಸಹಿಸದೆ, ಕಾಲಕೀವಿನ ರಸವನೆ ಹೀರಿದ,
ಹೊಟ್ಟೆ ಹುಳಕೆ ಸಂತೃಪ್ತಿ
ಬಡಜೀವಕೆ ಇನ್ನೆಲ್ಲಿಯ ತೃಪ್ತಿ

ಜಾಗತೀಕರಣದ ಬೇಗೆ ಬಡವನಿಗೆ
ಗರ್ಭಿಣಿಯ ಪ್ರಸವದ ಹಾಗೆ
ಬೇನೆಯೂ ತಾಳಲಾರ
ತಾಳದೆಯೂ ವಿಧಿಯಿಲ್ಲ

ಹಸಿದಿಹ ಹೊಟ್ಟೆಗೆ ಶ್ರೀಮಂತನ
ಕುಂಡಿಯ ತೊಳೆದ ನೀರನು ಕುಡಿಸುವ
ಅವನಿಗೆಲ್ಲಿದೆ ಮಾನವೀಯತೆ ಅಮಾನವೀಯ ಅವ ದೇವ
ಹಸಿದವನ ಕಷ್ಟವ ತಿಳಿಯದೆ
ಶ್ರೀಮಂತನ ಮಲದಲ್ಲೆಲ್ಲೋ ಲೀನವಾದ!

Monday, March 3, 2008

ಮೌನ, ಮಾತಿನ ಪ್ರೀತಿಯ ತಿರುವು.


ಮೌನ, ಮಾತಿಗೆ, ಪ್ರೀತಿ ಚಿಗುರಿದೆ,
ಸರಸದೊಡನೆ ವಿರಸವಾಗಿದೆ, ಈಗ
ಮಾತು ಮಾತಿನಾ ನಡುವೆ
ಮೌನ ಮೌನದಾ ಒಳಗೆ
ಒಳಗೊಳಗೆ ಎಳೆ ಜಗಳ
ಮೌನಕ್ಕೆ, ಹುಸಿಕೋಪ, ಮಾತಿಗೆ ಒಣಜಂಭ

ಮೌನ ಮಾತಾಡಿತು, ಮಾತು ಮೂಕವಾಯಿತು,
ಮೂಕ ಮಾತಿನ ತಿಳಿಯಿತು ಮೌನ.
ಮೌನ ಮಾತಿನ ನಡುವೆ ಒಂದು ರಣರಂಗ
ಮೌನದ ಗದ್ದಲಕ್ಕೆ! ಕಳಚಿತು ಪ್ರೀತಿಯ ಬೆಸುಗೆ

ಆ ಪ್ರೀತಿ ಸಮಾಧಿ ಮುಂದೆ
ಕಣ್ಣೀರ ಸುರಿಸಿ ಕಣ್ಣುಗಳೆ ಬತ್ತಿ ಹೋದಾಗ
ಕುರುಡಾಯಿತು ಕಣ್ಣು, ಮೌನದ ಭಾವನೆಗಳು ಸತ್ತು ಹೋಯಿತು
ಅಂತರಾಳವು ತಿಳಿಯಿತು
ಮಧುರ,ಮೌನ ಮಾತಿನ ಪ್ರೀತಿಯ.

ಅಮರವಾಯಿತು ಪ್ರೀತಿ, ಭಾವನೆಗಳ
ನಕ್ಷತ್ರ ಚಿತ್ತಾರದಲಿ,
ಮಾತು ಮಾತಾಡಿತು, ಮೌನ ಮಾತಾಡಿತು,
ಮೌನ, ಮಾತು, ಪ್ರೀತಿಗೆ ಶರಣಾಯಿತು.

About This Blog

  © Blogger template Valentine by Ourblogtemplates.com 2008

Back to TOP