ಇದು ಪೊಸಡಿಗುಂಪೆ
ಪ್ರಕೃತಿ ಸೊಬಗಿನ ರಮ್ಯಮನೋಹರ ದೃಶ್ಯ ಇಲ್ಲಿ ನಮ್ಮ ಕಣ್ಮನ ಸೆಳೆಯುತ್ತದೆ. ನಾವು ಇಲ್ಲಿ ಒಂದೇ ನೋಟದಲ್ಲಿ ಅರಬ್ಬೀ ಸಮುದ್ರವನ್ನೂ ಪಶ್ಚಿಮ ಘಟ್ಟವನ್ನೂ ವೀಕ್ಷಿಸಬಹುದು. ಇದು ಪೊಸಡಿಗುಂಪೆ. ಈ ತಾಣ ಕನರ್ಾಟಕದ ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿದೆ.
ಇಲ್ಲಿನ ಮಂಜೇಶ್ವರದಿಂದ ಪೂರ್ವಕ್ಕೆ 16 ಕಿ.ಮೀ ಸಂಚರಿಸಿದರೆ ಪೊಸಡಿಗುಂಪೆ ತಲುಪಬಹುದು. ಇದು ಸಮುದ್ರ ಮಟ್ಟದಿಂದ 1060 ಮೀ. ಎತ್ತರದಲ್ಲಿದೆ. ಗುಡ್ಡದ ತುದಿಯಲ್ಲಿ ನಿಂತು ಪೂರ್ವಕ್ಕೆ ಮುಖ ಮಾಡಿದರೆ ಕುದುರೆಮುಖ, ಕುಮಾರಪರ್ವತ ಹೀಗೆ ಅಸಂಖ್ಯಾತ ಬೆಟ್ಟಗುಡ್ಡಗಳು ಕಣ್ಮುಂದೆ ನಿಲ್ಲುತ್ತವೆ. ಪಶ್ಚಿಮಕ್ಕೆ ತಿರುಗಿದರೆ ಅರಬ್ಬೀ ಸಮುದ್ರ ಕಾಣಸಿಗುತ್ತದೆ.
ಸೂರ್ಯನ ರಶ್ಮಿಗಳು ಸಮುದ್ರದ ಮೇಲೆ ಬಿದ್ದು ನೀರು ಪಳ ಪಳನೆ ಹೊಳೆಯುವ ದೃಶ್ಯ ನೋಡುವುದೇ ಒಂದು ಖುಷಿ. ಗುಡ್ಡದ ಮಡಿಲಿನಿಂದ ಅರ್ಧದವರೆಗೆ ಪಾರೆಕಲ್ಲುಗಳೇ ತುಂಬಿಕೊಂಡಿವೆ. ತಪ್ಪಲನ್ನು ತಲುಪುತ್ತಿದ್ದಂತೆ ಮಣ್ಣನ್ನು ಕಾಣಬಹುದು ಅಲ್ಲಿಯವರೆಗೆ ಪಾರೆ ಕಲ್ಲಿನ ಮೇಲೆ ಕಸರತ್ತು ನಡೆಸಿಕೊಂಡು ಗುಡ್ಡ ಏರಬೇಕು. ಈ ಪಾರೆಕಲ್ಲುಗಳು ಕೆಲವೊಮ್ಮೆ ಪಕೃತಿಯೇ ನಿಮರ್ಿಸಿದಂತಹ ಸುಂದರ ಕೆತ್ತನೆಗಳಂತೆ ಗೋಚರಿಸುತ್ತವೆ. ಬೇರೆ ಬೇರೆ ಕೋನಗಳಿಂದ ಅದನ್ನು ವೀಕ್ಷಿಸಿದರೆ ಹೊಸ ಹೊಸ ಅರ್ಥಗಳನ್ನು ನೀಡುವ ಆಧುನಿಕ ಕಲಾಕೃತಿಗಳಂತೆ ಕಾಣುತ್ತವೆ. ಬೇಸಿಗೆಯಲ್ಲಿ ಪಾರೆಕಲ್ಲಿನ ಮೇಲೆ ಪಾರೆ ಹೂ ಕಾಣಬಹುದು. ಅಂತಯೇ ಪಾರೆ ಮುಳ್ಳುಗಳೂ ಇಲ್ಲಿವೆ.
ಇಲ್ಲಿನ ಮತ್ತೊಂದು ವಿಶೇಷವೆಂದರೆ ಗುಡ್ಡದ ಕೆಳಗಿರುವ ಹಳ್ಳಿಗರು ಇದೇ ಪಾರೆ ಕಲ್ಲುಗಳಿಂದ ತಮ್ಮ ಭೂಮಿಗೆ ಕೋಟೆಗಳನ್ನು ಕಟ್ಟಿಕೊಂಡಿರುವುದು. ಗುಡ್ಡದ ತುದಿಯಿಂದ ವೀಕ್ಷಿಸುವಾಗ ಈ ಕೋಟೆಗಳು ಇರುವೆಗಳ ಸಾಲಿನಂತೆ ಗೋಚರಿಸುತ್ತವೆ. ಗುಡ್ಡದಲ್ಲಿ ಮೊಣಕಾಲೆತ್ತರಕ್ಕೆ ಹುಲ್ಲು ಬೆಳೆಯುತ್ತದೆ ಇಲ್ಲಿನ ಹಳ್ಳಿಗರು ಇದನ್ನು 'ಮುಳಿ ಹುಲ್ಲು' ಎನ್ನುತ್ತಾರೆ. ಈ ಹುಲ್ಲನ್ನು ಜಾನುವಾರುಗಳಿಗೆ ಮೇವಾಗಿ ಕೊಡುತ್ತಾರೆ ಹೆಚ್ಚಾಗಿ ಮಳೆಗಾಲದಲ್ಲಿ ಒಣಹುಲ್ಲು ಸಿಗದಿರುವುದರಿಂದ ಇದನ್ನು ಮಳೆಗಾಲಕ್ಕೆ ದಾಸ್ತಾನು ಮಾಡಿಟ್ಟುಕೊಳ್ಳುತ್ತಾರೆ. ಮುಳಿ ಹುಲ್ಲನ್ನು ಮನೆಯ ಮಾಡಾಗಿ ಬಳಸುವುದೂ ಇದೆ ಆದರೆ ಈಗ ಈ ಹುಲ್ಲಿನ ಮಾಡನ್ನು ಕಾಣುವುದು ಬಹಳ ವಿರಳ, ಕೆಲ ಕುಟುಂಬಗಳು ಹಟ್ಟಿಗೆ ಇದರ ಮಾಡನ್ನು ಕಟ್ಟಿರುವುದನ್ನು ಈಗ ಕಾಣಬಹುದು.
ಸಂಜೆ ಹೊತ್ತಿನಲ್ಲಂತೂ ಇಲ್ಲಿ ಕುಳಿತು ಸೂಯರ್ಾಸ್ತಮಾನ ನೋಡುವಾಗಿನ ಖುಷಿಯೇ ಬೇರೆ. ಮೋಡಗಳ ಹಿಂದೆ ಅವಿತು ಕಣ್ಣಾಮುಚ್ಚಾಲೆ ಆಡುವ ಸೂರ್ಯನ ಆಟದಲ್ಲಿ ರಶ್ಮಿಗಳು ಮೋಡಗಳೆಡೆಯಿಂದ ತೂರಿ ಬರುತ್ತವೆ. ಸೂಯರ್ಾಸ್ತಮಾನ ಹತ್ತಿರವಾಗುತ್ತಿದ್ದಂತೇ ಸಮುದ್ರ ಕೆಂಬಣ್ಣಕ್ಕೆ ತಿರುಗಿ ನಾಚಿಕೊಳ್ಳುವ ಪರಿಯನ್ನು ಖುದ್ದು ಅಲ್ಲಿಯೇ ವೀಕ್ಷಿಸಬೇಕು.
4 ಪ್ರತಿಕ್ರಿಯೆ:
hi,i read your article. It was really good.As i read your article,it took me to Posadigumpe! all the best.
hi, this is Gangadhar yadav.Article waseally good..all the best..hope it will continue for ever...
This contains awesome photos, detailed information.. what else required for an wonderful article..
It shows your efforts to present a nice article.. Good work.. keep updating..
ಇತ್ತೀಚೆಗೆ ಬಾಯಾರುಗೆ ಹೋಗಿದ್ದಾಗ, ಪೊಸಡಿಗೆ ಹೋಗುವ ಸೂಚನಾ ಫಲಕ ನೋಡಿದ್ದೆ..ಕೇರಳ ಪ್ರವಾಸೊದ್ಯಮದವರು ಹಾಕಿದ್ದು. ಆದರೆ ಅದರ ಬಗ್ಗೆ ವಿವರ ಸಿಕ್ಕಿರಲಿಲ್ಲ.. ಕೆಲವರು ರೆಸಾರ್ಟ್ ಅಂದರು..ಕೆಲವರು ಫಾಲ್ಸ್ ಅಂದರು.. ಒಟ್ಟಾರೆ ಊರಿನವರಿಗೆನೇ ಸರಿಯಾದ ಮಾಹಿತಿ ಇಲ್ಲ! ನಿಮ್ಮ ಲೇಖನ ತುಂಬಾ ಮಾಹಿತಿಯನ್ನೊದಗಿಸಿತು. ಬರವಣೆಗೆಯೂ ಚೆನ್ನಾಗಿದೆ. ಧನ್ಯವಾದಗಳು.
Post a Comment