Tuesday, February 26, 2008

ಮೌನ ಮಿತ್ರನ ತಿರುವು.


ಬದುಕು ಕನಸು
ಬಣ್ಣವಿಲ್ಲದ ಚಿತ್ರ


ಕಗ್ಗತ್ತಲೆಯ ಕಾಡ
ಚುಂಬನ


ತಿಳಿಯದು
ಮನಕೆ


ಪ್ರೇಮದಾ ಝೇಂಕಾರದಿ
ಮೈಮರೆತು


ಅಂಜಿದೆನು ಚಿಟ್ಟೆಯ
ರೆಕ್ಕೆ ಗಾಳಿಗೆ


ಅದೋ ಪ್ರಾಣಪಕ್ಷಿಯ
ಸ್ವಚ್ಛಂದ ವಿಹಾರ


ಮೌನ ಮಿತ್ರ, ಚಿರಂತನ
ಯೌವನಕೆ ನೆಚ್ಚಿದ


ಕ್ರೂರ ವಿಧಿಯ ರಕ್ಕಸ ನಗು
ಕಣ್ಣಿರು ನದಿಯಾಗಿ ಸಾಗರದ ಮಿಲನ


ಯಾಕೀ ಮಹಾಪಾತಕ
ಜೀವನ


ಅಗ್ನಿ ಕುಂಡದೊಳಗಿನ ಸೌಂದರ್ಯ
ಸಾವಿಗೆ ಸುಸ್ವಾಗತ


ಸಾವೇ ಕೊನೆಯಲ್ಲ
ಹೊಸಬಾಳ ಆರಂಭ


ಉದಯ ರವಿಯ
ಬದುಕು ಸಂಜೆಯ ಕನಸು.

Read more...

ವಿಷಾದಗಳ ತಿರುವು


ಆಲೋಚನೆಗಳೆಲ್ಲವೂ

ಸತ್ತು ಹೋದವು

ಅಥವಾ

ಆತ್ಮಹತ್ಯೆಗೆ ಶರಣಾದವು

ಎಂತಹ ವಿಷಾದ.


ಒಬ್ಬಂಟಿಯಾದೆ, ಹಸಿರುಚಿಗುರಿದ

ಮರದಲ್ಲಿ ಒಣ ತರಗೆಲೆಯಂತೆ,

ಬಿರುಗಾಳಿಗೆ ಸಿಕ್ಕಿ

ಎತ್ತಲೋ ಹಾರಿ ಹೋದೆ

ಎಂತಹ ವಿಷಾದ.


ಹಲವಾರು ಧರ್ಮಗಳಿವೆ

ನೂರಾರು ಮಾರ್ಗವಿದೆ ಯಾತ್ರಿಗಳಿಗೋ

ಯಾನಕ್ಕೆ ರಥವೇ ಇಲ್ಲ

ರಥವಿದ್ದರೂ ಅದಕ್ಕೆ ಚಕ್ರವಿಲ್ಲ

ಎಂತಹ ವಿಷಾದ.


ಜಗವನೇ ಗೆದ್ದ ರಾಜ

'ಭೂ'ಪತಿ ನಾನೇ ಎಂದ

ಕೊನೆ ಘಳಿಗೆಯಲ್ಲಿ

ನೆನಪಾದದ್ದು ಅಲೆಕ್ಸಾಂಡರ್ ಮಾತ್ರ

ಎಂತಹ ವಿಷಾದ.


ಪ್ರಶ್ನೆ ಪ್ರಶ್ನೆಯಾಗೇ ಉಳಿಯಿತು,

ಉತ್ತರ ಹುಡುಕುವುದು ಕಷ್ಟವೇನಲ್ಲ

ಮತ್ತದೇ ಉದಾಸೀನ,

ನನ್ನಿಂದೇನೂ ಸಾಧಿಸಲು ಸಾಧ್ಯವಿಲ್ಲ

ಎಂತಹ ವಿಷಾದ.

Read more...

About This Blog

  © Blogger template Valentine by Ourblogtemplates.com 2008

Back to TOP