Tuesday, February 26, 2008

ಮೌನ ಮಿತ್ರನ ತಿರುವು.


ಬದುಕು ಕನಸು
ಬಣ್ಣವಿಲ್ಲದ ಚಿತ್ರ


ಕಗ್ಗತ್ತಲೆಯ ಕಾಡ
ಚುಂಬನ


ತಿಳಿಯದು
ಮನಕೆ


ಪ್ರೇಮದಾ ಝೇಂಕಾರದಿ
ಮೈಮರೆತು


ಅಂಜಿದೆನು ಚಿಟ್ಟೆಯ
ರೆಕ್ಕೆ ಗಾಳಿಗೆ


ಅದೋ ಪ್ರಾಣಪಕ್ಷಿಯ
ಸ್ವಚ್ಛಂದ ವಿಹಾರ


ಮೌನ ಮಿತ್ರ, ಚಿರಂತನ
ಯೌವನಕೆ ನೆಚ್ಚಿದ


ಕ್ರೂರ ವಿಧಿಯ ರಕ್ಕಸ ನಗು
ಕಣ್ಣಿರು ನದಿಯಾಗಿ ಸಾಗರದ ಮಿಲನ


ಯಾಕೀ ಮಹಾಪಾತಕ
ಜೀವನ


ಅಗ್ನಿ ಕುಂಡದೊಳಗಿನ ಸೌಂದರ್ಯ
ಸಾವಿಗೆ ಸುಸ್ವಾಗತ


ಸಾವೇ ಕೊನೆಯಲ್ಲ
ಹೊಸಬಾಳ ಆರಂಭ


ಉದಯ ರವಿಯ
ಬದುಕು ಸಂಜೆಯ ಕನಸು.

7 ಪ್ರತಿಕ್ರಿಯೆ:

Anonymous February 27, 2008 at 5:04 AM  

ಪ್ರಯತ್ನಕ್ಕೆ ಶಹಬ್ಬಾಸ್... ಆದರೆ `ವ್ಯಕ್ತಿ ಮುಖ್ಯ ಅಲ್ಲ... ಆ ವಾಕ್ಯ ಅಲ್ಲಿ ಹಾಕಿದ್ದು ಅಷ್ಟೊಂದು ಉತ್ತಮ ಅಂತ ನನಗನ್ನಿಸಲಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ.
ಬೇಸರಿಸದಿರು.
ಹರೀಶ್ ಕೆ. ಆದೂರು.

Unknown February 27, 2008 at 8:52 AM  

It is really EXCELLENT. Very good effort. Keep updating. I am very proud to say "you are my friend"

VENU VINOD March 1, 2008 at 11:23 PM  

ಮಹೇಶ್
ಬ್ಲಾಗ್ ಲೋಕಕ್ಕೆ ಸ್ವಾಗತ...ಸದಾ ಬೆಳೆಯುತ್ತಿರುವ ಕನ್ನಡ ಬ್ಲಾಗ್ ವರ್ತುಲ ನಿಮ್ಮಂತಹ ಹೊಸ ಆಲೋಚನೆ ಹೊಂದಿದವರಿಗೆ ಒಳ್ಳೆಯ ವೇದಿಕೆಯಾಗಲಿ...ಅಪ್‌ಡೇಟ್ ಮಾಡುತ್ತಿರಿ...

ವಿಜಯ್ ಜೋಶಿ March 2, 2008 at 5:12 AM  

chennagidhe. time ge sariyaagi update maaduttiru...

ಮಹೇಶ್ ಪಿ March 3, 2008 at 2:11 AM  

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

kisahn April 25, 2008 at 10:07 PM  

superb man.........vry nice

savisihi November 20, 2008 at 10:48 PM  

hi mahesh chennagide
neenu kavi anta gotte erlilla kano
sdm li papa edde. ega.....
vav!gud luk

About This Blog

  © Blogger template Valentine by Ourblogtemplates.com 2008

Back to TOP